Skip to main content

Kiccha Sudeep: ಬಿಗ್‌ಬಾಸ್‌ನಲ್ಲಿ ಬಾಲಿವುಡ್‌ನವರನ್ನು ಮೀರಿಸಿದ ಕಿಚ್ಚ ಸುದೀಪ್‌ ಡ್ರೆಸ್‌! ಏನಿದರ ಸ್ಪೆಷಲ್‌?

 ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ (Kiccha Sudeep) ವೀಕೆಂಡ್‌ನಲ್ಲಿ ಧರಿಸುವ ಯೂನಿಕ್‌ ಔಟ್‌ಫಿಟ್‌ಗಳನ್ನು ನೋಡಲು ಅಭಿಮಾನಿಗಳು ಮಾತ್ರವಲ್ಲ, ಫ್ಯಾಷನ್‌ ಪ್ರಿಯರು ಕಾದಿರುತ್ತಾರೆ. ಇದಕ್ಕೆ ಕಾರಣ ಪ್ರತಿಬಾರಿ ಅವರು ಧರಿಸುವ ಯೂನಿಕ್‌ ಫ್ಯಾಷನ್‌! ಅವರ ಈ ಡಿಫರೆಂಟ್‌ ಡಿಸೈನರ್‌ವೇರ್ಸ್ ಬಗ್ಗೆ ಇಲ್ಲಿದೆ ಸಂಕ್ಷೀಪ್ತ ಡಿಟೇಲ್ಸ್.


ಬೆಂಗಳೂರು: ಪ್ರತಿವಾರ ಬಿಗ್‌ಬಾಸ್‌ನಲ್ಲಿ ಕಿಚ್ಚ ಸುದೀಪ್‌ ಯಾವ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕೇವಲ ಅವರ ಅಭಿಮಾನಿಗಳಿಗಷ್ಟೇ ಅಲ್ಲ, ಫ್ಯಾಷನ್‌ ಪ್ರಿಯರಿಗೂ ಕುತೂಹಲವಿರುತ್ತದೆ. ಹೌದು. ಸುದೀಪ್‌ರವರು ಪ್ರತಿ ವೀಕೆಂಡ್‌ನಲ್ಲಿ ಧರಿಸುವ ಒಂದೊಂದು ಡಿಫರೆಂಟ್‌ ಔಟ್‌ಫಿಟ್‌ಗಳು ನೋಡುಗರ ಕಣ್ಣರಳಿಸುತ್ತವೆ. ಕೆಲವೊಮ್ಮೆ ಬಾಲಿವುಡ್‌ಗರನ್ನು ಮೀರಿಸುವಂತಹ ಹುಬ್ಬೇರಿಸುವಂತಹ ಫ್ಯೂಶನ್‌ ಡಿಸೈನರ್‌ವೇರ್‌ಗಳನ್ನು ಕಾಣಬಹುದು. ಈ ಡಿಸೈನರ್‌ವೇರ್‌ಗಳ ಹಿಂದಿರುವ ಡಿಸೈನರ್‌ಗಳ್ಯಾರು? ಡಿಸೈನ್‌ ಆಯ್ಕೆ ಹೇಗೆ? ಅಷ್ಟ್ಯಾಕೆ ದುಬಾರಿ ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

ವಾರಕ್ಕೆ ಇಬ್ಬರ ಡಿಸೈನರ್ಸ್ ಔಟ್‌ಫಿಟ್ಸ್ ಧರಿಸುವ ಸುದೀಪ್‌

ವಾರಕ್ಕೆ ಇಬ್ಬರ ಡಿಸೈನರ್ಸ್ ಔಟ್‌ಫಿಟ್ಸ್ ಧರಿಸುವ ಸುದೀಪ್‌ಗೆ ಸೂಟನ್ನು ರ‍್ಯಾಂಪ್‌ ಲೆಬೆಲ್‌ನ ಸೆಲೆಬ್ರೆಟಿ ಡಿಸೈನರ್‌ ಭರತ್‌ ರಾಮ್‌ದಾಸ್‌ ಸಿದ್ಧಪಡಿಸಿದರೇ, ಜಂಪ್‌ಸೂಟ್‌ನಂತವನ್ನು ಡಿಸೈನರ್‌ ಭರತ್‌ ಸಾಗರ್‌ ಸಿದ್ಧಪಡಿಸಿ, ಸ್ಟೈಲಿಂಗ್‌ ಮಾಡುತ್ತಾರಂತೆ.

ಲಕ್ಷ ರೂ. ಮೀರುವ ದುಬಾರಿ ಔಟ್‌ಫಿಟ್‌ಗಳಿವು

ಇನ್ನು, ಕಿಚ್ಚ ಸುದೀಪ್‌ರವರು ಧರಿಸುವ ಒಂದೊಂದು ಸೂಟ್‌ನ ಫ್ಯಾಬ್ರಿಕ್‌ ಇಟಲಿ, ಲಂಡನ್‌ ಹಾಗೂ ಜಪಾನ್‌ನಿಂದ ಅಮದು ಮಾಡಿಕೊಳ್ಳಲಾಗುತ್ತದಂತೆ. ಇವುಗಳ ಫ್ಯಾಬ್ರಿಕ್‌ ಫಾಲ್‌ ಆ್ಯಂಡ್‌ ಫೀಲ್‌ ಟೆಕ್ಚ್ಷರ್‌ ಹೊಂದಿರುವುದರಿಂದ ಇವುಗಳ ಬೆಲೆ ದುಬಾರಿಯಂತೆ. ಕಡಿಮೆ ಎಂದರೂ ಒಂದು ಸೂಟ್‌ ಸೆಟ್‌ ಬೆಲೆ 70 ಸಾವಿರ ದಾಟುತ್ತದಂತೆ. ಕೆಲವೊಮ್ಮೆ ಲಕ್ಷ ರೂ.ಗಳನ್ನೂ ಮೀರಬಹುದು.


ಸುದೀಪ್‌ರ ಅಭಿರುಚಿಗೆ ತಕ್ಕಂತೆ ಡಿಸೈನರ್‌ವೇರ್ಸ್

ಆರಂಭದಿಂದಲೂ ಬಿಗ್‌ಬಾಸ್‌ ಸೀಸನ್‌ಗಳಿಗಾಗಿ ಡಿಸೈನರ್‌ ಭರತ್‌ ರಾಮ್‌ದಾಸ್‌ ಅವರು ಸಿದ್ಧಪಡಿಸಿರುವ ಸೂಟ್‌ಗಳು ಸಖತ್‌ ಟ್ರೆಂಡ್‌ ಸೆಟ್‌ ಮಾಡಿದೆಯಂತೆ. “ಪ್ರತಿವಾರ ಮೂರ್ನಾಲ್ಕು ಸೂಟ್‌ ಸೆಟ್‌ ರೆಡಿ ಇರಿಸಿರುತ್ತೇವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವರ ಅಭಿರುಚಿಗೆ ತಕ್ಕಂತೆ ಫೀಡ್‌ಬ್ಯಾಕ್‌ ಪಡೆದು ಕಲರ್ಸ್ ಹಾಗೂ ವಿನ್ಯಾಸವನ್ನು ಡಿಫರೆಂಟ್ ಆಗಿ ಸಿದ್ಧಪಡಿಸುತ್ತೇವೆ” ಎನ್ನುತ್ತಾರೆ ಭರತ್ ರಾಮ್‌ದಾಸ್‌. ಮತ್ತೊಂದು ದಿನ ಡಿಫರೆಂಟ್‌ ವಿನ್ಯಾಸದ ಜಂಪ್‌ ಸೂಟ್‌ ಸೆಟ್‌ಗಳಲ್ಲಿ ಕಾಣಿಸುವ ಸುದೀಪ್‌ ಅವರಿಗೆ ಇವನ್ನು ಸ್ಟೈಲಿಂಗ್‌ ಹಾಗೂ ಡಿಸೈನ್‌ ಮಾಡುವುದು ಮತ್ತೊಬ್ಬ ಡಿಸೈನರಾದ ಭರತ್‌ ಸಾಗರ್‌. ಧರಿಸುವ ಶೂನಿಂದ ಹಿಡಿದು, ಆಕ್ಸೆಸರೀಸ್‌ ಆಯ್ಕೆ ಕೂಡ ಇವರದ್ದೇ.

ಸುದೀಪ್‌ ಡಿಸೈನರ್‌ವೇರ್‌ ಡಿಟೇಲ್ಸ್

ಭರತ್‌ ರಾಮ್‌ದಾಸ್‌ ಅವರ ರ‍್ಯಾಂಪ್‌ ಬ್ರ್ಯಾಂಡ್‌ ಆಕಾಶ ನೀಲಿ ವರ್ಣದ ಅತ್ಯಾಕರ್ಷಕ ವಿನ್ಯಾಸದ ಕೊ-ಆರ್ಡ್ ಜಾಕೆಟ್‌ ಔಟ್‌ಫಿಟ್‌, ರಸ್ಟಿಕ್‌ ಚಾರ್ಮ್ ನೀಡಿದ ಆಲೀವ್‌ ಗ್ರೀನ್‌ ಜಾಕೆಟ್‌, ತಿಳಿ ಹಾಫ್‌ ವೈಟ್‌ ವರ್ಣದ ಓವರ್‌ಸೈಝ್‌ ಜಾಕೆಟ್‌ ಸೆಟ್‌, ಫ್ಲಾನೆಲ್‌ ಫ್ಯಾಬ್ರಿಕ್‌ನ ಕೋಲ್‌ ಕೋ ಆರ್ಡ್ ಜಾಕೆಟ್‌ ಸೆಟ್‌, ಬೀಸ್ಪೋಕ್‌ ಕ್ಯಾರೆಮಲ್‌ ಕೆಫೆ ಜಾಕೆಟ್‌, ಪೇಂಟರ್‌ ಪ್ಯಾಂಟ್‌ ಶೈಲಿಯೊಂದಿಗೆ ಬ್ಲಾಕ್‌ ಫಾರೆಸ್ಟ್ ಗ್ರೀನ್‌ ಶೇಡ್‌ನ ಸೆಟ್‌ ಸೇರಿದಂತೆ ಸುದೀಪ್‌ ಧರಿಸಿದ ಜಾಕೆಟ್‌ ಸೂಟ್ಸ್ ಫ್ಯಾಷನ್‌ ಪ್ರಿಯರನ್ನು ಸೆಳೆದಿವೆ.


ಇನ್ನು, ಸೂಟ್‌ ಹೊರತುಪಡಿಸಿದಲ್ಲಿ, ಸುದೀಪ್‌ರ ಜಂಪ್‌ಸೂಟ್‌ ಶೈಲಿಯ ಔಟ್‌ಫಿಟ್‌ ಗಮನಿಸಿರುತ್ತೀರಿ! ಇದು ಡಿಸೈನರ್‌ ಹಾಗೂ ಸ್ಟೈಲಿಸ್ಟ್ ಭರತ್‌ ಸಾಗರ್‌ ಕೈ ಚಳಕ ಎನ್ನಬಹುದು. ಇಲ್ಲಿ ಅವರು ಬಾಟಲ್‌ ಪೈಪ್‌ ಬ್ರ್ಯಾಂಡ್‌ ನ ಜಂಪ್‌ಸೂಟ್‌ ಜತೆಗೆ ರೇರ್‌ ರ‍್ಯಾಬೀಟ್‌, ಅರ್ಮಾನಿ ಸೇರಿದಂತೆ, ನಾನಾ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಆ್ಯಕ್ಸೆಸರೀಸ್‌ ಮಿಕ್ಸ್‌ ಮ್ಯಾಚ್‌ ಮಾಡಿದ್ದಾರೆ. ಹಾಗಾಗಿ ಈ ಕಂಪ್ಲೀಟ್‌ ಜಂಪ್‌ಸೂಟ್‌ ಔಟ್‌ಫಿಟ್‌ ಲುಕ್‌ ತೀರಾ ದುಬಾರಿ ಎನ್ನಬಹುದು. ಇವೆಲ್ಲಾ ಹೈ ಮೆನ್ಸ್‌ ಫ್ಯಾಷನ್‌ ಲಿಸ್ಟ್‌ಗೆ ಸೇರುತ್ತದೆ.

ಮೂಲತಃ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ: 👉 Kannada News

ಇಂತಹ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 👉 kannada cinema news

Comments

Popular posts from this blog

Kichcha Sudeep: ನಿಮ್ಗೆ ದರ್ಶನ್‌, ಯಶ್‌ ಮಾತ್ರ ಕಾಣೋದಾ? ಧ್ರುವ ಪರ ನಿಂತ ಸುದೀಪ್‌!

 Kichcha Sudeep: ನಟ ದರ್ಶನ್‌ ಮತ್ತು ಧ್ರುವ ಸರ್ಜಾ ನಡುವಿನ ಮನಸ್ತಾಪದ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್‌ ಅವರು ಆಡಿರುವ ಮಾತುಗಳು ಕುತೂಹಲ ಮೂಡಿಸಿವೆ. ಬೆಂಗಳೂರು:  ನಟ ದರ್ಶನ್ ಹಾಗೂ ಸುದೀಪ್ ಇಬ್ಬರ ನಡುವೆ ಮನಸ್ತಾಪ ಇರುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಇಬ್ಬರು ಸ್ಟಾರ್‌ ನಟರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುವುದು ಮತ್ತೊಮ್ಮೆ ಬಹಿರಂಗವಾಗಿದ್ದು, ಇದಕ್ಕೆ ಕಾರಣ ಕಿಚ್ಚ ಸುದೀಪ್‌ ಅವರು ನೀಡಿರುವ ಹೇಳಿಕೆ. ಹೌದು, ಕೆಸಿಸಿ ಕ್ರಿಕೆಟ್‌ ಕಪ್‌ ಕುರಿತ ಸುದ್ದಿಗೋಷ್ಠಿಯಲ್ಲಿ ನಟ ಕಿಚ್ಚ ಸುದೀಪ್‌ ಅವರು ಆಡಿರುವ ಮಾತುಗಳು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕಾವೇರಿ ನೀರಿಗಾಗಿ ನಡೆದ ಪ್ರತಿಭಟನೆ ವೇಳೆ ದರ್ಶನ್‌ ಮತ್ತು ಧ್ರುವ ಸರ್ಜಾ ಪರಸ್ಪರ ಮಾತನಾಡದ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ನಂತರ ದರ್ಶನ್‌ ಜತೆ ಮನಸ್ತಾಪ ಇರುವುದು ನಿಜ ಎಂದು ಧ್ರುವ ಹೇಳಿದ್ದರು. ಹೀಗಾಗಿ ಧ್ರುವ ಸರ್ಜಾರನ್ನು ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್‌ ಅಭಿಮಾನಿಗಳು ಟ್ರೋಲ್‌ ಮಾಡಿದ್ದರು. ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ವರದಿಗಾರರೊಬ್ಬರು ಕೆಸಿಸಿ ಪಂದ್ಯಗಳಿಗೆ ದರ್ಶನ್, ಯಶ್, ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ, ರಾಜ್‌ ಬಿ ಶೆಟ್ಟಿ ಅವರನ್ನು ಕರೆದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ...

Kannada New Movie: ಸೆಟ್ಟೇರಿಯೇ ಬಿಡ್ತು ಚಟ್ಟ ಸಿನಿಮಾ; ನೀವಂದುಕೊಂಡಂತಲ್ಲ ಇದು!

  Kannada New Movie: ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಗಮನ ಸೆಳೆಯುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ ‘ಚಟ್ಟ’ ಸಿನಿಮಾ. ಬೆಂಗಳೂರು:  ಶೀರ್ಷಿಕೆಯೇ ಸಿನಿಮಾ (Kannada New Movie) ಪ್ರೇಕ್ಷಕರಿಗೆ ಮೊದಲ ಆಮಂತ್ರಣ. ಸಿನಿಮಾ ಮೇಕರ್‌ಗಳು ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ನಿರ್ಮಾಪಕರದ್ದು. ಈ ನಡುವೆ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ ‘ಚಟ್ಟ’ ಸಿನಿಮಾ. ನಿರ್ದೇಶಕ ಭಾನು ಪ್ರಕಾಶ್ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ‘ಕೇರ್ ಆಫ್ ಫುಟ್ಬಾತ್’ ಸೇರಿದಂತೆ ಒಂದಷ್ಟು ಕನ್ನಡ ಹಾಗೂ ತೆಲುಗು ಇಂಡಸ್ಟ್ರೀಯಲ್ಲಿಯೂ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡಿರುವ ಭಾನು ಪ್ರಕಾಶ್, ಈ ಭರವಸೆಯೊಂದಿಗೆ ಚಟ್ಟ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ ಹಾಕಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಾಡಲಾಗಿದೆ. ಕವಿರತ್ನ ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜೋಸೈಮನ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಭಾನು ಪ್ರಕಾಶ್ ಹೊಸ ಕನಸಿಗೆ ಜತೆಯಾದರು. ಈ ವೇಳೆ ನಿರ್ದೇಶಕ ಭಾನು ಪ್ರಕಾಶ್ ಮಾತನಾಡಿ, ʻʻಚಟ್ಟ ಎಂದರೆ ನಾವು ಅಂದುಕೊಂಡಂತೆ ಎತ್ತಿಕೊಂಡು ಹೋಗುವುದಲ್ಲ....

Kantara Movie: ಯೂಟ್ಯೂಬ್​ನಲ್ಲಿ ದಾಖಲೆ ಬರೆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್; ವೀವ್ಸ್ ಎಷ್ಟು?

 K antara Movie: ಯೂಟ್ಯೂಬ್​ನಲ್ಲಿ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ದಾಖಲೆ ಬರೆದಿದೆ. ಯೂಟ್ಯೂಬ್​ನಲ್ಲಿ24 ಗಂಟೆಗಳಲ್ಲಿ ವೀಕ್ಷಿಸಿದ್ದು ಎಷ್ಟು ಮಂದಿ ಗೊತ್ತೆ? ಬೆಂಗಳೂರು:  ಕಳೆದ ವರ್ಷ ತೆರೆಕಂಡ ʼಕಾಂತಾರʼ ಚಿತ್ರ (Kantara Movie) ಸೂಪರ್‌ ಹಿಟ್‌ ಆಗಿತ್ತು. ಕನ್ನಡ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದರ ಎರಡನೇ ಭಾಗ ಬರುತ್ತದೆ ಎನ್ನುವಾಗಲೇ ಸಾಕಷ್ಟು ಕುತೂಹಲ ಮೂಡಿತ್ತು. ಅದರಂತೆ ನವೆಂಬರ್ 27ರಂದು ರಿಲೀಸ್ ಆದ ‘ಕಾಂತಾರ ಚಾಪ್ಟರ್ 1’ ಫಸ್ಟ್ ಲುಕ್ ಟೀಸರ್ ದಾಖಲೆಯ ವೀಕ್ಷಣೆ ಕಂಡಿದೆ. ಏಳು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಟೀಸರ್ ಬರೋಬ್ಬರಿ 12 ಮಿಲಿಯನ್ (1.2 ಕೋಟಿ) ಭಾರಿ ವೀಕ್ಷಣೆ ಕಂಡಿದೆ. ಈ ಮೂಲಕ ಹಲವು ದಾಖಲೆಗಳನ್ನು ಇದು ಸರಿಗಟ್ಟಿದೆ. ನವೆಂಬರ್ 27ರಂದು ಕುಂದಾಪುರ ಆನೆಗುಡ್ಡೆ ದೇವಾಲಯದಲ್ಲಿ ಚಿತ್ರತಂಡ ಸ್ಕ್ರಿಪ್ಟ್ ಪೂಜೆ ಮಾಡಿದೆ. ಜತೆಗೆ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ʼಕಾಂತಾರʼ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್‌ ಈ ಚಿತ್ರವನ್ನೂ ತಯಾರಿಸಲಿದೆ. ಈ ಬಾರಿ ಇತಿಹಾಸದ ನಿಗೂಢ ಸತ್ಯ ಹೇಳುವುದಕ್ಕೆ ರಿಷಬ್ ಶೆಟ್ಟಿ ತಯಾರಿ ಮಾಡಿಕೊಂಡಿದ್ದಾರೆ. ಕಾಡುಬೆಟ್ಟು ಶಿವನ ತಂದೆಯ ರಹಸ್ಯ ರಿವೀಲ್ ಮಾಡಲು ಹೊರಟ್ಟಿದ್ದಾರೆ ರಿಷಬ್‌. 2024ಕ್ಕೆ ‘ಕಾಂತಾರ-1’ ಚಿತ್ರಮಂದಿರಗಳಿಗೆ ಬರಲಿದೆ. ರಿಷಬ್ ಶೆಟ್ಟಿ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಖಡ್ಗ ಹಿಡಿದಿರು...